ಸಾವಿರಾರು ವರ್ಷಗಳ ಇತಿಹಾಸವಿರುವ ಗಂಗಾಮತ ಸಮಾಜವು ತನ್ನದೇ ಆದ ಮಹತ್ವವನ್ನು ಹೊಂದಿದೆ. ಕರ್ನಾಟಕದ ಬುಡಕಟ್ಟು ಸಮುದಾಯಗಲ್ಲೊಂದಾದ ಗಂಗಾಮತ ಸಮಾಜವು 39 ಪರ್ಯಾಯ ಪದಗಳಿಂದ (ಜಾತಿಗಳಿಂದ) ಗುರುತಿಸಲ್ಪಡುತ್ತದೆ. ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಮತ್ತು ಶೈಕ್ಷಣಿಕವಾಗಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಿದೆ ಮತ್ತು ಇತರೆ ಸಮಾಜಗಳೊಂದಿಗೆ ಸಮಾನ ಸ್ಥಾನದಲ್ಲಿ ನಿಲ್ಲಬೇಕಿದೆ, ಈ ನಿಟ್ಟಿನಲ್ಲಿ ಶಕ್ತಿ ತುಂಬಲು ನಮ್ಮ ಘನವೆತ್ತ ಮಾತೃ ಸಂಘವಾದ "ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘ" ದ ಒಂದು ಘಟಕವಾಗಿ "ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ" ವು ತನ್ನ ಕಾರ್ಯನಿರ್ವಹಿಸುತ್ತಿದೆ..

ಭಾರತ ದೇಶದಲ್ಲಿರುವ ಪ್ರಾಚೀನ ಬುಡಕಟ್ಟೆಗಳಲ್ಲಿ ಅಂಬಿಗರು ಬೆಸ್ತರು, ಕೋಳಿ, ಕಬ್ಬಲಿಗ ಸಮುದಾಯವೂ ಒಂದು. ಇವರನ್ನು ಬೆಸ್ತ, ಬುಂಡೆ ಬೆಸರ, ಅಂಬಿಗ, ಕೋಳಿ, (ಕೋಲಿ), ಕಬ್ಬಲಿಗ, ಕಬ್ಬೇರ, ಮಚ್ಚಿ ಗಾಬಿತ್, ಗಂಗೆಯ ಮಕ್ಕಳು, ಗಂಗಾಪುತ್ರ, ಗಂಗಾಮತಸ್ಥರು, ಮೀನುಗಾರ, ಬೋಯಿ (ಭೋಯಿ) ತೊರೆಯ, ಪರಿವಾರ, ನಾಯಕ, ತಳವಾರ, ಟೋಕ್ರೆಕೋಳಿ, ಮಹಾದೇವಕೋಳಿ, ಮೊಗವೀರರು, ಹರಿಕ೦ತರು, ಖಾರ್ವಿ, ಗಂಗಕುಲ, ಬಾರ್ಕಿ, ಸೂರ್ಯವಂಶ ಕೋಳಿ, ಇತ್ಯಾದಿ 39 ಕ್ಕಿಂತ ಹೆಚ್ಚು ಪರ್ಯಾಯ ಹೆಸರುಗಳಿಂದ ಕರೆಯುತ್ತಾರೆ. ಉತ್ತರ ಕರ್ನಾಟಕದಲ್ಲಿ ವಾಲಿಕಾರ, ತಳವಾರ, ಜಮಾದಾರ, ನಾಟಿಕಾರ, ಕೋಲುಕಾರ, ಬಾರಿಕೇರ, ಸುಣಗಾರ, ಮಾಲಿಯವರು, ದಳಪತಿಗಳು, ಮೊಗವೀರ, ಹರಿಕಾಂತರ, ಅಂಬಿಗ, ಅಂಬಿಗೇರ, ಕಬ್ಬಲಿಗ, ಕಬ್ಬಲಿಗಾರ, ಕೋಳಿ ಇತ್ಯಾದಿ ಆಯಗಾರಿಕೆಯಂತಹ ಉದ್ಯೋಗಗಳನ್ನವಲಂಬಿಸಿ, ತಮ್ಮ ಜಾತಿಯನ್ನೇ ಅಡ್ಡ ಹೆಸರುಗಳನ್ನು ಇಟ್ಟುಕೊಂಡು ಸ್ವಾಭಿಮಾನ ಮೆರೆದಿದ್ದಾರೆ. 12ನೇ ಶತಮಾನದಲ್ಲಿ ಅನೇಕ ಶರಣರು ತಮ್ಮ ಕುಲದೇವರನ್ನೇ ಅಂಕಿತನಾಮವನ್ನಾಗಿ ವಚನಗಳಲ್ಲಿ ಬೆಳೆಸಿಕೊಂಡಿದ್ದಾರೆ. ಆದರೆ, ನಿಜಶರಣ ಅಂಬಿಗರ ಚೌಡಯ್ಯ ಮಾತ್ರ ತನ್ನ ಜಾತಿಯನ್ನೇ ವಚನಗಳ ಅಂಕಿತನಾಮವನ್ನಾಗಿಟ್ಟುಕೊಂಡು ಸ್ವಾಭಿಮಾನ ಮೆರೆದಿದ್ದಾರೆ.

ಸಿಂಧು ಸಂಸ್ಕೃತಿಯ ನಂತರ ವೇದಗಳ ಕಾಲದಲ್ಲಿ ಈ ಜನಾಂಗದ ಕುರುಹಗಳು ಸಿಗುತ್ತವೆ, ರಾಮಾಯಣ, ಮಹಾಭಾರತದಂತ ರೂವಾರಿಗಳೆ ಬೆಸ್ತರಾಗಿದ್ದಾರೆ. ಮಹಾಭಾರತದ ಗಂಗೆಯ ಪುತ್ರ ಭೀಷ, ರಾಮಾಯಣ ಬರೆದ ವಾಲ್ಮೀಕಿ, ಶಂತನು ಮಹಾರಾಜ, ಅಂಬಿ, ಅಂಬಾಲಿಕೆ, ಗಂಗಾದೇವಿ, ಮತ್ಸಗಂಧಿ, ಸುಗಂಧಿನಿ, ದುರ್ಗ೦ಧಿನಿ ವೇದವ್ಯಾಸ ಸಾಕ್ಷಾತ್ ಅಗಸ್ತ್ಯ ಕಬ್ಬಲಿಗರು, (ವ್ಯಾಸ ಬೊಯಿತಿ ಮಗ) ಗೌತಮ ಬುದ್ಧ, ಶಾಖ್ಯ ಕುಲದವನು, ಕರ್ಣ, ಪರಶುರಾಮ, ಗಂಗರಾಜ, ಕೋಲಿರಾಜ, 12ನೇ ಶತಮಾನದ ಅಂಬಿಗರ ಚೌಡಯ್ಯ, ರಾಣಿ ಪೂಲನದೇವಿ , ಮಾತಾಮಾಣಿಕ್ಯ ದೇವಿ, ಖ್ಯಾತ ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್, ಖ್ಯಾತ ಸಾಹಿತಿ ಚೆನ್ನಣ್ಣ ವಾಲಿಕಾರ, ಡಾ. ಗೀತಾನಾಗಭೂಷಣ, ಮುಂತಾದವರು ಇದೇ ಜನಾಂಗದವರಾಗಿದ್ದಾರೆ.

ಚರಿತ್ರೆಯ ಕಾಲಕ್ಕೆ ಬಂದರೆ, ಅಲೆಕ್ಸಾಂಡರನ ಕಾಲದಲ್ಲಿ ಅಂಬಿರಾಜನ ಉಲ್ಲೇಖವಿದೆ, ಬರುತ್ತಿದ್ದು, ಆತನು ಸಹ ಇದೆ ಕುಲದೇವನು ಆಗಿದ್ದಾನೆ. ಬಾದಾಮಿ ಚಾಲುಕ್ಯರ ಅರಸ ಮಂಗಳೇಶನು ದಕ್ಷಿಣ ಭಾರತದಲ್ಲಿ 7ನೇ ಶತಮಾನದಲ್ಲಿ ಸಿಂಹಾಸನಕ್ಕೆ ಬಂದಾಗ ರೇವತಿ ದ್ವೀಪವನ್ನು ವಶಪಡಿಸಿಕೊಳ್ಳವಾಗ ಅಂಬಿಗರ (ಬೆಸ್ತರ) ಸಹಾಯದಿಂದ ಜಯಶಾಲಿಯಾದನೆಂದು ತನ್ನ ಶಾಸನದಲ್ಲಿ ಬರೆಯಿಸಿದ್ದಾನೆ. ಇದು ಇವರ ಪ್ರಾಚೀನ ಚರಿತ್ರೆಗೆ ಸ್ಪಷ್ಟ ದಾಖಲೆಯಾಗಿದೆ.

ಅಷ್ಟೆ ಅಲ್ಲದೆ ದಕ್ಷಿಣ ಭಾರತದಲ್ಲಿ ಉತ್ತರ ಭಾರತದಲ್ಲಿ ಆಳ್ವಿಕೆ ಮಾಡುತ್ತಿದ್ದ ರಾಜ ಮಹಾರಾಜರ ಆಳ್ವಿಕೆಯಲ್ಲಿ ಅಂಬಿಗರು, ಬೆಸ್ತರು, ಕೋಲಿ(ಕೋಳಿ), ಕಬ್ಬಲಿಗರು, ತಳವಾರರು, ವಾಲಿಕಾರರು, ಬಾರಿಕರು, ಗಂಗಾಪುತ್ರರು, ಕ್ಷತ್ರಿಯರಾಗಿ ಧನರುಬಲದ ಬಿಲ್ಲುವಿದ್ಯೆ, ಖಡ್ಗವಿದ್ಯೆ, ಮಲ್ಲಯುದ್ಧ, ಭಾಣಯುದ್ಧದಂತ ಸಹಾಸಮಯವಾದ ಯುದ್ಧಗಳಲ್ಲಿ ಹೋರಾಡಿ ನಾಡಿನ ರಕ್ಷಣೆಗೆ ರಾಜರ ಶಕ್ತಿಯ ಬಲವಾಗಿ ನಿಂತಿದ್ದರು. ಅಂಬಿರಾಜ, ಬುದ್ಧ, ಕೊಲಿರಾಜನಂತಹವರು ರಾಜ್ಯವನ್ನೇ ಕಟ್ಟಿ ಆಳಿದ್ದಾರೆ. ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಮೊಟ್ಟಮೊದಲ ಬಾರಿಗೆ ಫೋರ್ಚಗಿಸರೊಂದಿಗೆ ಕಡಲಿನಲ್ಲಿ ಹೋರಾಡಿ ಜಯಶಾಲಿಯಾದ ರಾಣಿ ಅಬ್ಬಕ್ಕದೇವಿ ಈ ಜನಾಂಗದ ಮೋಗವೀರರ (ಬೆಸ್ತರು-ಅಂಬಿಗರು) ಸಹಾಯದಿಂದಲೇ ಜಯಶಾಲಿಯಾದೆ ಎಂದು ಮೊಗವೀರರನ್ನು ವರ್ಣಿಸಿದ್ದಾಳೆ. ಇದು ರಾಣಿ ಅಬ್ಬಕ್ಕಳ ಚರಿತ್ರೆಯಿಂದ ತಿಳಿದುಬರುತ್ತದೆ.

ಹೀಗೆ ಆದಿಯಿಂದ ಅದ್ಭುತವಾದ ಚರಿತ್ರೆ, ಸಂಸ್ಕೃತಿಯನ್ನು ಹೊಂದಿರುವ ಅಂಬಿಗರ ಸಮುದಾಯದವರು 39 ಪರ್ಯಾಯ ಪದಗಳಿಂದ ಕರೆಯಿಸಿಕೊಂಡು ಬೇರೆ ಬೇರೆ ವೃತ್ತಿಗಳನ್ನು ಮಾಡಿಕೊಂಡು ಬದಕುತ್ತಿದ್ದಾರೆ. ಬಡತನ, ಶಿಕ್ಷಣ, ಉದ್ಯೋಗ, ಮೀಸಲಾತಿ ಸೌಲಭ್ಯ, ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಂಬಿಗರ ಸಮುದಾಯಕ್ಕೆ ಸೂಕ್ತವಾದ ರಾಜಕೀಯ ಸ್ಥಾನಮಾನಗಳು ದೊರಕಿಲ್ಲ. ಹೀಗಾಗಿ ಈ ಬುಡಕಟ್ಟಿನ ಜನಾಂಗದವರು ಬಹಳ ಹಿಂದುಳಿದಿದ್ದಾರೆ. ಇಂತಹ ಗಂಭೀರ ಸಮಸ್ಯೆಗಳನ್ನು ಎದುರಿಸಲು ಮತ್ತು ಸಮುದಾಯಕ್ಕೆ ಬೇಕಾದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು, ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘ (ರಿ) ಮತ್ತು ಕರ್ನಾಟಕ ರಾಜ್ಯ ಗಂಗಾಮತಸ್ಥ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ಜಂಟಿಯಾಗಿ ಹೋರಾಡಲು ಸಿದ್ಧವಾಗಿವೆ.

ನಮ್ಮ ಸಮಾಜದ ಪೀಠಾಧಿಪತಿಗಳು