ಶಿಕ್ಷಣದ ಮೂಲಕ ಸಮಾಜವನ್ನು ಸದೃಢ ಮತ್ತು ಬಲಿಷ್ಠ ಗೊಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಶ್ರೀ. ಗಂಗಾ ವಿದ್ಯಾಸಿರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಸಮಾಜದ ಅರ್ಹ ವಿದ್ಯಾರ್ಥಿ/ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ ಶೈಕ್ಷಣಿಕ ಪ್ರೋತ್ಸಾಹ ಧನವನ್ನು ಪೂರೈಸುವುದು ಈ ಯೋಜನೆಯ ಮಹಾದಶೆಯಾಗಿದೆ. ಡಾ।। ನಾಗೇಂದ್ರ. ಎಫ್. ಹೊನ್ನಳ್ಳಿ ಯವರು ಈ ಯೋಜನೆಯ ಪ್ರಧಾನ ಸಂಚಾಲಕರಾಗಿದ್ದು, ಅವರ ಮಾರ್ಗದರ್ಶನದಲ್ಲಿ ಈ ಯೋಜನೆಯನ್ನು ಮುನ್ನಡೆಸಲಾಗುತ್ತಿದೆ. ಸಾವಿರಾರು ಕೊಡುಗೈದಾನಿಗಳು, ಈ ಯೋಜನೆಗೆ ತಮ್ಮ ತನು, ಮನ, ಧನ,ಗಳೊಂದಿಗೆ ಪ್ರೋತ್ಸಾಹಿಸಿ ಸಮಾಜದ ಮಕ್ಕಳಿಗೆ, ಶಿಕ್ಷಣ ಪ್ರೋತ್ಸಾಹಿಸುವ ಮತ್ತು ದೊರಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಮಾಜದ ಬಡ ಮಕ್ಕಳು, ಹಾಗೂ ಬಡತನದ ಕಾರಣದಿಂದ ಶಿಕ್ಷಣವನ್ನು ಮುಂದುವರೆಸಲಾಗದ, ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ಮಕ್ಕಳಿಗೆ ಈ ಯೋಜನೆಯ ಲಾಭವನ್ನು ದೊರಕಿಸಿಕೊಡಲು ಕರ್ನಾಟಕ ನೌಕರರ ಕ್ಷೇಮಾಭಿವೃದ್ಧಿ ಸಂಘವು ಈ ಯೋಜನೆಯನ್ನು ಸಮರ್ಪಿಸುತ್ತಿದೆ. .
ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿ ವರ್ಷ SSLC ಮತ್ತು ದ್ವಿತೀಯ PUC ಯ ವಿಜ್ಞಾನ,ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಬೆಂಗಳೂರು,ಮೈಸೂರು,ಕಲಬುರ್ಗಿ ಮತ್ತು ಬೆಳಗಾವಿ ಕಂದಾಯ ವಿಭಾಗಗಳಲ್ಲಿ ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಾಗೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣದ ನೆರವಿಗಾಗಿ ಧನಸಹಾಯ, ಐಎಎಸ್, ಕೆಎಎಸ್, ವೃತ್ತಿಪರ ಕೋರ್ಸ್, ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಧನಸಹಾಯ ಒದಗಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.
ಈ ಮಹತ್ ಕಾರ್ಯಕ್ಕೆ ಸರ್ವರೂ ಧನಸಹಾಯ ಮಾಡಿ ಸಮಾಜದ ಪ್ರತಿಭಾನ್ವಿತರಿಗೆ ಸಹಾಯವಾಗಲು ತಮ್ಮಲ್ಲಿ ವಿನಂತಿ
ಧನಸಹಾಯ ಮಾಡಲು ಈ ಕೆಳಗಿನ ಬ್ಯಾಂಕ್ ಖಾತೆ ಮುಖಾಂತರ ಹಣ ವರ್ಗಾಯಿಸಲು ವಿನಂತಿ
ಫೋನ್ ಪೇ ಮುಖಾಂತರವೂ ಹಣವನ್ನು ವರ್ಗಾಯಿಸಬಹುದು, ಕೆಳಗಿನ QR ಕೋಡ್ ನ್ನು ಉಪಯೋಗಿಸಿ.