ಗಂಗಾಮತ ಸಮಾಜದಲ್ಲಿರುವ ಸದಸ್ಯ ನೌಕರರ ವಿವಿಧ ಉಪಜಾತಿಗಳೆಲ್ಲವನ್ನು ಒಂದುಗೂಡಿಸಿ ಐಕ್ಯತೆ ಹಿತವರ್ಧನೆ ಕಾಪಾಡುವುದು.
ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ನೊಂದಣಿ ಸಂಖ್ಯೆ 63/2000-2001 ದಿನಾಂಕ 27ನೇ ಏಪ್ರಿಲ್ 2000 ರಂದು ಅಸ್ತಿತ್ವದಲ್ಲಿ ಬಂದಿದ್ದು, ಸಮಾಜದ ಮುತ್ಸದ್ದಿಗಳಾದ ಶ್ರೀ ಹೆಚ್ ದೇವೇಂದ್ರಪ್ಪ, ಶ್ರೀ. ಶಿವಶರಣ ಬಾರಕೇರ, ಶ್ರೀ. ಶ್ರೀಕಂಠಪ್ಪ ಎಂ. ಎನ್, ಶ್ರೀ. ಕೆ ಆರ್. ಧರ್ಮಪ್ಪ, ಶ್ರೀ. ಎನ್. ಶ್ರೀನಿವಾಸಲು , ಶ್ರೀ. ಎಸ್ ವೈ . ಪಾಟೀಲ, ಶ್ರೀ. ಕೆ ಎನ್ ದೇವಪ್ಪ, ಶ್ರೀ. ಎಮ್ ಎಸ್ ಈಶ್ವರಿಕುಮಾರ, ಡಾ. ಹೆಚ್ ವೈ ಹರೀಶ, ಶ್ರೀ. ಅಂಬೋಜ್ ಎಸ್ ಎನ್, ಶ್ರೀ. ಚಂದ್ರಪ್ರಸಾದ್ ಇನ್ನೂ ಮುಂತಾದವರ ಮುಂದಾಳತ್ವದಲ್ಲಿ, ಸಮಾಜದ ಕಾಲಜಿ ಮತ್ತು ಮುಂದಾಲೋಚನೆಯಿಂದ ಗಂಗಾಮತಸ್ಥ ನೌಕರರ ಕ್ಷೇಮಾಭಿವೃದ್ಧಿ ಸಂಘ ಜನ್ಮ ತಾಳಿದ್ದು ಸಮಾಜದ ಮಾತೃಸಂಘವಾದ ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘ ಇದರ ಒಂದು ಘಟಕವಾಗಿ ಕೆಲಸ ನಿರ್ವಹಿಸುತ್ತಿದೆ. ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ವಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮತ್ತು ನಿರ್ವಹಿಸಿರುವ ಸಮಾಜದ ಎಲ್ಲ ಬಂಧುಗಳನ್ನು ಒಗ್ಗೊಡಿಸಿಕೊೆಯುವದರ ಜೊತೆಗೆ ಕೆಳಗಿನ ಉದ್ದೇಶಗಳನ್ನು ಒಳಗೊಂಡಿದೆ :
ಗಂಗಾಮತ ಸಮಾಜದಲ್ಲಿರುವ ಸದಸ್ಯ ನೌಕರರ ವಿವಿಧ ಉಪಜಾತಿಗಳೆಲ್ಲವನ್ನು ಒಂದುಗೂಡಿಸಿ ಐಕ್ಯತೆ ಹಿತವರ್ಧನೆ ಕಾಪಾಡುವುದು.
ಸದಸ್ಯ ನೌಕರರ ಕುಟುಂಬದಲ್ಲಿರುವ ಬಡ ವಿದ್ಯಾರ್ಥಿಗಳ ವಿವಿಧ ಹಂತಗಳಲ್ಲಿ ಅಭ್ಯಾಸ ಮಾಡುವವರಿಗೆ ಆರ್ಥಿಕ ಸಹಾಯ, ಬಹುಮಾನ, ವಿದ್ಯಾರ್ಥಿವೇತನ, ಸಾಲರೂಪದ ವಿದ್ಯಾರ್ಥಿ ವೇತನ, ಹಾಗೂ ವಸ್ತುಗಳ ರೂಪದಲ್ಲಿ ಸಹಾಯ ನೀಡುವುದು.
ಸದಸ್ಯ ನೌಕರರ ಕುಟುಂಬದಲ್ಲಿರುವ ಮಕ್ಕಳಿಗೆ, ಸಹೋದರ ಸಹೋದರಿಯರಿಗೆ, ಭಾ. ಆ. ಸೇ, ಕ.ಆ.ಸೇ, ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ಮತ್ತು ಸಂಸ್ಥೆಗಳ ಸ್ಥಾಪನೆ.
ಸಂಘದ ಸದಸ್ಯತ್ವ ಹೊಂದಿದ ನೌಕರರ ಹಿತ ರಕ್ಷಣೆ ಕಾಪಾಡುವುದು.
ಸದಸ್ಯತ್ವ ನೌಕರರ ಕುಟುಂಬದಲ್ಲಿರುವ ಮಕ್ಕಳ ಶೈಕ್ಷಣಿಕ ಸೌಲಭ್ಯಕ್ಕಾಗಿ ಶಿಶುವಿಹಾರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾಲೇಜು, ಹಾಗು ವಿವಿಧ ವೃತ್ತಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು, ನಡೆಸುವುದು, ಮತ್ತು ಧನ ಸಹಾಯ ಮಾಡುವುದು.
ಸದಸ್ಯ ನೌಕರರ ಕುಟುಂಬಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ, ಅಂಗವಿಕಲರಿಗೆ, ನಿರ್ಗತಿಕರಿಗೆ, ನಿತ್ಸಹಾಯಕ ಸ್ಥಿತಿಯಲ್ಲಿರುವವರ, ವಿಧವೆಯರ, ವಿದುರರ, ಅಶಕ್ತ ಸ್ಥಿತಿಯಲ್ಲಿರುವವರ, ವಯಸ್ಸಾದ ನಿರ್ಗತಿಕರಿಗೆ, ಸಹಾಯವಾಗುವ ಕ್ಷೇಮಾನಿಧಿಗಳನ್ನು ಹಾಗೂ ನಿರ್ಗತಿಕರ ನಿಲಯಗಳನ್ನು ಸ್ಥಾಪಿಸುವುದು.
ಸದಸ್ಯ ನೌಕರರಿಗೆ ಆರ್ಥಿಕ ಸಹಾಯಕ್ಕಾಗಿ ಮತ್ತು ಅಭಿವೃದ್ಧಿಗಾಗಿ ಸಹಕಾರಿ ಸಂಘ, ಬಳಕೆದಾರರ ಸಹಕಾರಿ ಸಂಘ, ಸಹಕಾರಿ ಬ್ಯಾಂಕ್, ಗೃಹ ನಿರ್ಮಾಣ ಸಹಕಾರ ಬ್ಯಾಂಕ್, ಹಾಗೂ ಕ್ಷೇಮ ನಿಧಿಗಳನ್ನು ಸ್ಥಾಪಿಸುವುದು.
ಸದಸ್ಯ ನೌಕರರ ಕುಟುಂಬ ಸದಸ್ಯರ ಜ್ಞಾನಾಭಿವೃದ್ಧಿಗಾಗಿ ಸಂಘದ ಉತ್ತರೋತ್ತರ ಅಭಿವೃದ್ಧಿಗಾಗಿ, ಪುಸ್ತಕಗಳನ್ನು, ನಿಯತಕಾಲಿಕೆಗಳನ್ನು, ಮಾಸ ಪತ್ರಿಕೆಗಳನ್ನು, ಪ್ರಕಟಿಸುವ ಕೈಪಿಡಿ, ಇತರ ಪ್ರಕಟನಾ ಸಾಮಗ್ರಿಗಳನ್ನು ಸಮಾಜದ ಜಾಗೃತಿಯ ಸಲುವಾಗಿ ಪ್ರಕಟಿಸುವುದು.
ಸದಸ್ಯ ನೌಕರರ ಕುಟುಂಬದ ಸದಸ್ಯರ ಸರ್ವತೋಮುಖ ಅಭಿವೃದ್ಧಿಗಾಗಿ ವಾಚನಾಲಯ, ಪುಸ್ತಕ ಭಂಡಾರ, ಇತ್ಯಾದಿಗಳ ಸ್ಥಾಪನೆ.
ಸದಸ್ಯ ನೌಕರರ ಕುಟುಂಬದಲ್ಲಿರುವ ವಧು-ವರರ ಹೊಂದಾಣಿಕೆಯನ್ನು ಮಾಡಿಕೊಳ್ಳುವುದರ ಸಲುವಾಗಿ ವರ-ಕನ್ಯಾ ವೇದಿಕೆಗಳನ್ನು ಸ್ಥಾಪಿಸುವುದು, ಒಳಪಂಗಡಗಳ ಭೇದ ಮರೆತು ಆಗುವ ವಿವಾಹಗಳಿಗೆ ಪ್ರೋತ್ಸಾಹ ನೀಡುವುದು, ಹಾಗೂ ಸಾಮೂಹಿಕ ವಿವಾಹಗಳನ್ನು ಸಂಘಟಿಸುವುದು.
ಸದಸ್ಯ ನೌಕರರ ಕುಟುಂಬದ ಸದಸ್ಯರು ವಿವಿಧ ವೃತ್ತಿಗಳಲ್ಲಿ ತೊಡಗಿದವರ ಅಂಕಿ ಅಂಶಗಳನ್ನು ಸಂಗ್ರಹಿಸುವುದು ಆರ್ಥಿಕ ಅಭಿವೃದ್ಧಿ ಸಭೆ ಸಮ್ಮೇಳನಗಳನ್ನು ಸಂಘಟಿಸುವುದು.
ಸದಸ್ಯ ನೌಕರರ ಕುಟುಂಬದ ಯುವಕ ಯುವತಿಯರಿಗೆ ಸ್ವಂತ ಉದ್ಯೋಗವನ್ನು ಕೈಗೊಳ್ಳಲು ಆರ್ಥಿಕ ಸಹಾಯವನ್ನು ಒದಗಿಸಿ ಅವರ ಸ್ಥಾನಮಾನಗಳನ್ನು ಉನ್ನತೀಕರಿಸುವುದು.
ಸದಸ್ಯ ನೌಕರರಿಗೆ ಅನುಕೂಲವಾಗುವ ಯಾವುದೇ ಇತರೆ ಯೋಜನೆಗಳನ್ನು ಹಮ್ಮಿಕೊಳ್ಳುವುದು