ಉಡುಪಿ ಜಿಲ್ಲೆಯ ಸಾಸ್ತಾನ ಸಮೀಪದ ಗುಡ್ಮಿ ಅನ್ನು ಮಟ್ಟ ಗ್ರಾಮದಲ್ಲಿ ಕಡಲನ್ನೇ ನಂಬಿ ಬದುಕು ಸಾಗಿಸುವ ಸಾಮಾನ್ಯ ಮೀನುಗಾರರಾದ ಶ್ರೀಮತಿ ಲಕ್ಷ್ಮಿ ಬಂಗೇರ ಮತ್ತು ಶ್ರೀ ಸೋಮ ಬಂಗೇರ ದಂಪತಿಗಳ ಹಿರಿಯ ಸುಪುತ್ರರಾಗಿ 1955ರ ಅಕ್ಟೋಬರ್ 5 ರಂದು ಜನ್ಮತಾಳಿದ ಜಿ. ಶಂಕರ್ ಅವರೊಂದಿಗೆ ಇದ್ದುದ್ದು ಬಡತನ ಮಾತ್ರ. ಇದೇ ಜಿ. ಶಂಕರ್ ಶಿಕ್ಷಣ ಕಲಿಯಬೇಕು ಎನ್ನುವ, ಮಹದಾಸೆ ಅವರಲ್ಲಿ ಇದ್ದರೂ, ಮನೆಯ ಬಡತನದ ತೊಡಗಿನಿಂದಾಗಿ ಒಂದು ಹಂತದ ಶಿಕ್ಷಣ ಮೊಟಕಾಯಿತಾದರೂ ಸಣ್ಣ ಪ್ರಾಯದಲ್ಲೇ ಬದುಕಿನ ಬಂಡಿಯನ್ನು ಎಳೆಯಲು ಮುಖ ಮಾಡಿದ್ದು, ದೂರದ ಬಿಜಾಪುರ (ವಿಜಯಪುರ) ಜಿಲ್ಲೆಗೆ, ಕಠಿಣ ಪರಿಶ್ರಮದಿಂದ ಬದುಕಿನಲ್ಲಿ ಯಶಸ್ಸು ಸಾಧಿಸಿದ ಅವರಲ್ಲಿ ಶಿಕ್ಷಣ ಆಸಕ್ತಿಯ ಕನಸು ಮಾತ್ರ ಬತ್ತದೇ ಇದ್ದುದರಿಂದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಕಾಂ ಪದವಿ ಪಡೆದುಕೊಂಡರು. ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರಾಗಿ ತಮ್ಮ ಉದ್ಯೋಗವನ್ನು ಆರಂಭಿಸಿದ ಜಿ. ಶಂಕರ್, ಈ ಕ್ಷೇತ್ರದಲ್ಲಿ ಹಿಂದಿರುಗಿ ನೋಡಲಿಲ್ಲ. ಪ್ರಾರಂಭದಲ್ಲಿ ಬಿಜಾಪುರ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಹಳಷ್ಟು ಕಾಮಗಾರಿಗಳನ್ನು ಪೂರೈಸಿದ್ದಾರೆ. ರಾಜ್ಯದ ಪ್ರಮುಖ ಗುತ್ತಿಗೆದಾರರಲ್ಲಿ ಒಬ್ಬರಾಗಿರುವ ಐಶ್ವರ್ಯ ಬಂದಾಗ ಎಂದಿಗೂ ತಮ್ಮ ವಿನಿತ್ತ ವರ್ತನೆಯನ್ನು ಬದಲಾವಣೆ ಮಾಡಿಕೊಂಡವರಲ್ಲ, ಕಷ್ಟ ಹಾಗೂ ಸುಖದ ದಿನಗಳನ್ನು ಸಮನಾಗಿ ಸ್ವೀಕರಿಸುವ ಮನೋಭಾವನೆಗಳು ಅವರಲ್ಲಿ ಇದ್ದುದರಿಂದ ಸಣ್ಣ ವಯಸ್ಸಿನಲ್ಲೇ ಸಮಾಜಮುಖಿಯಾಗಿ ಬೆಳೆದರು.
ಹುಟ್ಟೂರು ಜಿಲ್ಲೆಯಾದ ಉಡುಪಿಗೆ ಬಂದ ಬಳಿಕ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಸ್ಥಾಪಿಸಿ ಅದರ ಮೂಲಕ ತಾವು ಮಾಡುತ್ತಿರುವ ಸೇವಾ ಕಾರ್ಯಗಳು ಸಮಾಜದ ಇತರರಿಗೆ ಮಾದರಿಯಾಗಿದೆ. ಸಮಾಜದ ನೊಂದ ಜನರ ಕಣ್ಣೀರು ಒರೆಸುವ ನಿಮ್ಮ ಕಾರ್ಯಗಳಿಗೆ ಜಾತಿ- ಮತಗಳ ನಿರ್ಬಂಧವಿಲ್ಲ. ಸಹಾಯಹಾಸ್ತವನ್ನು ಚಾಚುವ ನಿಮ್ಮ ಕೈಗಳಿಗೆ ಯಾವುದೇ ಇತಿಮಿತಿಯಿಲ್ಲ. ಆರೋಗ್ಯ, ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಪರಂಪರೆ, ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ಸಮಾಜದ ಪರಮುಖ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆಗಳನ್ನು ನೀಡಿ ಸಮಾಜಮುಖಿಯಾಗಿ ಬೆಳೆದ ರೀತಿ ಅನುಕರಣೀಯ, ಜೊತೆಗೆ ಇಂದಿಗೆ ಅದೆಷ್ಟೋ ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳು, ದೇವಸ್ಥಾನಗಳು, ಭಜನಾ ಮಂದಿರಗಳು, ಜಿ. ಶಂಕರ್ ಅವರ ನೆರಳಲ್ಲಿ ಬೆಳೆದು ನಿಂತಿವೆ. ಸಮಾಜದ ಶ್ರೇಷ್ಠ ಕೊಡುಗೆ ಎಂಬ ಕೀರ್ತಿಗೆ ಪಾತ್ರರಾದ ಅವರು, ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ, ಮೊಗವೀರ ಕುಲರತ್ನ, ಮೊಗವೀರ ಕುಲಭೂಷಣ, ಮೊಗವೀರ ಕಣ್ಮಣಿ, ಮೊಗವೀರ ಸೇವಾರತ್ನ, ಮೊಗವೀರ ಯುಗಪುರುಷ, ಜಾಯಿಂಟ್ ಇಂಟರ್ ನ್ಯಾಷನಲ್ ಅವಾರ್ಡ್, ರಾಷ್ಟ್ರೀಯ ಕನ್ನಡ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಶ್ರೀಕೃಷ್ಣಾನುಗ್ರಹ ಪ್ರಶಸ್ತಿ, ಶ್ರೀರಾಮ ವಿಠಲ ಪ್ರಶಸ್ತಿಗಳೆಲ್ಲವನ್ನು ನಿಮ್ಮ ಮುಡಿಗೇರಿಸಿಕೊಂಡಿದ್ದೀರಿ. ಸಮಾಜದ ಹಿತಚಿಂತಕರಾಗಿರುವ ಸೇವಾಭಿಮನ್ಯು, ನಾಡೋಜ ಡಾ. ಜಿ. ಶಂಕರ್ ರವರ ಸೇವಾ ಆಸಕ್ತಿ ಇನ್ನಷ್ಟು ಉಜ್ವಲವಾಗಲಿ, ನಿಮ್ಮ ಹಿರಿಮೆ ಬೆಳಗಲಿ, ಬೆಳೆಯಲಿ ಎಂದು ಕರ್ನಾಟಕ ರಾಜ್ಯ ಗಂಗಾಮತಸ್ಥ ನೌಕರರ ಕ್ಷೇಮಾಭಿವೃದ್ಧಿ ಸಂಘ, ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಸಮಾಜದ ಬಂದುಗಳು ತುಂಬು ಹೃದಯದಿಂದ ಆಶಿಸುತ್ತೇವೆ.
ನಮ್ಮ ಸಮಾಜದ ಧುರೀಣರು, ಹಿರಿಯ ಮತ್ತು ನಾಡೋಜ ಡಾ. ಜಿ.ಶಂಕರ್ ಅವರು ಗಂಗಾಮತಸ್ಥರನ್ನು ಉನ್ನತ ಮಟ್ಟಕ್ಕೇರಿಸಲು ಮಾಡಿರುವ ಸಾಧನೆ ಅಪಾರ. ಗಂಗಾಮತಸ್ಥ ನೌಕರರ ಕ್ಷೇಮಾಭಿವೃದ್ಧಿ ಸಂಘದ ಮಹಾಪೋಷಕರಾಗಿ, ನಮಗೆ ಮಾರ್ಗದರ್ಶಕರಾಗಿರುವುದು ಅವರ ಸೇವಾ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘ, ಬೆಂಗಳೂರು ರೂ. 15 ಕೋಟಿ, ಜಿಲ್ಲಾ ಗಂಗಾಮತಸ್ಥರ ಸಂಘ, ಬೈಲಹೊಂಗಲ, ಬೆಳಗಾವಿ, ರೂ. 2 ಕೋಟಿ, ಜಿಲ್ಲಾ ಗಂಗುಮತಸ್ಕರ ಸಂಘ, ಶಿವಮೊಗ್ಗ ರೂ.10 ಲಕ್ಷ, ಜಿಲ್ಲಾ ಗಂಗಾಮತಸ್ಥರ ಸಂಘ, ದಾವಣಗೆರೆ ರೂ. 50 ಲಕ್ಷ, ಜಿಲ್ಲಾ ಗಂಗಾಮತಸ್ಥರ ಸಂಘ, ಮಂಡ್ಯ ರೂ.10 ಲಕ್ಷ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಗಂಗಾಮತ ಸಮಾಜದ ಹಲವಾರು ಬೃಹತ್ ಸಮಾವೇಶಗಳನ್ನು ನಡೆಸಿದ್ದು ವಿಶೇಷವಾಗಿದೆ.
ನಮ್ಮ ಕರೆಗೆ ಸ್ಪಂದಿಸಿದ ಡಾ. ಜಿ. ಶಂಕರ್ ಅವರು, ಶ್ರೀ. ಗಂಗಾ ವಿದ್ಯಾಶ್ರೀ ಯೋಜನೆಗೆ ರೂ. 50.00 ಲಕ್ಷಗಳನ್ನು ದೇಣಿಗೆ ನೀಡಿದ್ದಲ್ಲದೇ ಸಂಘಕ್ಕೆ ಡಾ. ಜಿ .ಶಂಕರ್ ಅವರೇ ಮಾರ್ಗದರ್ಶಕರಾಗಿರುವುದು ಹೆಮ್ಮೆಯ ವಿಷಯವಾಗಿದೆ. ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸಬಯಸುತ್ತೇವೆ.
ಮುಂದಿನ ದಿನಗಳಲ್ಲಿ ಅವರ ಸಹಕಾರ ಮತ್ತು ಸಲಹೆ-ಸೂಚನೆಗಳೊಂದಿಗೆ ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕುಗಳಲ್ಲಿ ಮತ್ತಷ್ಟು ಸಂಘವನ್ನು ಬಲಪಡಿಸಲು ನಮ್ಮ ಜನಾಂಗದ ಏಳಿಗೆಗಾಗಿ ಅವರ ಸಹಾಯ, ಸಹಕಾರ ಹೀಗೆ ಮುಂದುವರೆಯಲಿ ಎಂದು ಗಂಗಾಮತಸ್ಥರ ಅಧಿದೇವತೆ ಶ್ರೀ ಗಂಗಾಪರಮೇಶ್ವರಿಯ ಅನುಗ್ರಹ ಅವರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ. ಇಂತಹ ಮಹಾನ್ ನಾಯಕರಿಗೆ ಕರ್ನಾಟಕ ರಾಜ್ಯ, ಗಂಗಾಮತಸ್ಥರ ಸಂಘದ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತು ಸಮಾಜ ಎಲ್ಲಾ ಬಾಂಧವರ ಪರವಾಗಿ ಅಭಿನಂದನೆಗಳನ್ನು ತಿಳಿಯಬಯಸುತ್ತೇವೆ.